ಯತ್ಯಾಗ  - 
ಭಾರತದ ಪರ್ಣಪಾತಿ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಉಪಯಕ್ತ ಸಸ್ಯ (ಯೆಲೊ ಟೀಕ್). ರೂಬಿಯೇಸೀ ಕುಟುಂಬಕ್ಕೆ ಸೇರಿದೆ.  ಅಡೈನಾ ಕಾರ್ಡಿಪೋಲಿಯ ಇದರ ವೈಜ್ಞಾನಿಕ ಹೆಸರು.  ಎತ್ತಿಗೆ ಎತ್ಯಾಗ, ಹೆತ್ತೇಗ, ಅರ್ಸಿನ ತೇಗ ಪರ್ಯಾಯನಾಮಗಳು.

   ಚೌಗಿಲ್ಲದ ಬೆಟ್ಟದ ತಪ್ಪಲು ಪ್ರದೇಶ ನೀರು ಬಸಿದು ಹೋಗುವಂಥ ಮೆಕ್ಕಲು ಮಣ್ನಿನ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುತ್ತದೆ.  ಸುಮರು 30 ಮೀಗಳಿಗೂ ಎತ್ತರಕ್ಕೆ ಅಗಲವಾಗಿ ಹರಡಿಕೊಂಡು ಬೆಳೆಯುವ ಮರ ಇದು. ತೊಗಟೆ ಬುದು ಬಣ್ಣಕ್ಕೆ.  ತೊಗಟೆ ಸುಲಿದಾಗ ಒಳಭಾಗ ತಿಳಿಗೆಂಪು ಬಣ್ಣಕ್ಕೆ ಇರುತ್ತದೆ.  ಎಲೆಗಳು ಅಗಲವಾಗಿ ಹೃದಯಯಾಕಾರದಲ್ಲಿವೆ.  ಪ್ರತಿವರ್ಷ ಫಬ್ರವರಿ ತಿಂಗಳಿನಲ್ಲಿ ಎಲೆಗಳೆಲ್ಲ ಉದುರಿಹೋಗಿ ಮೇ-ಜೂನ್ ತಿಂಗಳಿನವೆರೆಗೂ ಮರದಲ್ಲಿ ಎಲೆಗಳೇ ಇರುವುದಿಲ್ಲ. ಜೂನ್-ಆಗಸ್ಟ್ ತಿಂಗಳುಗಳಲ್ಲಿ ಹೂಗಳು ಅರಳುವವು.  ಹಣ್ಣು ಬಲಿಯುವುದು ಅಕ್ಟೋಬರ್ ವೇಳೆಗೆ ಬೀಜಗಳು ಬಲು ಸಣ್ಣ ಗಾತ್ರದವು.  

   ಮರ ಶುಷ್ಕಹವೆಯನ್ನು ಸಹಿಸಬಲ್ಲದು ಎಳೆಯ ಸಸಿಗಳು ದನಕರುಗಳಿಗೂ ಮೇಕೆಗಳಿಗೂ ಜಿಂಕೆಗಳಿಗೂ ಮೆಚ್ಚಿನ ಆಹಾರವಾಗಿರುವುದರಿಂದ ಹಾನಿಗೊಳಗಾಗುತ್ತವೆ.  ಸ್ವಾಭಾವಿಕ ಪುನರುತ್ಪತ್ತಿ ಇದೆ.  ಬೀಜ ಸಣ್ಣಗಿರುವುದರಿಂದ ಬಿತ್ತನೆಯಿಂದ ಬೆಳೆಸುವುದು ಕಷ್ಟಸಾಧ್ಯವಾದರೂ ಒಟ್ಟುಪಾತಿಗಳಲ್ಲಿ ಬಿತ್ತಿ. ಸಸಿಗಳನ್ನು ಪಡೆದು ಬೇಕೆನಿಸಿದ ಕಡೆ ನಾಟಿ ಮಾಡುವುದು ರೂಢಿಯಲ್ಲಿರುವ ಪದ್ಧತಿ, 

  ಇದರ ಚೌಬೀನೆ ಗಟ್ಟಿ ಹಾಗೂ ಬಲಯುತ, ಬಾಳಿಕೆ ಸಾಧಾರಣವಾದರೂ ಕೆತ್ತ£,É ಕಡೆತ ಮುಂತಾದ ಕೆಲಸಗಳಿಗೆ ಉತ್ತಮವೆನಿಸಿದೆ. ಒಳರಚನೆ ಸೂಕ್ಷ್ಮವಾಗಿರುವುದರಿಂದ ನುಣುಪಾಗಿ ಹೊಳಪು ಪಡೆಯಬಲ್ಲದು. ಕುರ್ಚಿ, ಮೇಜು, ಹಲಗೆ, ಶೇವಿಂಗ್ ಬ್ರಷ್ ಹಿಡಿ ಬಾಚಣಿಗೆ, ಕೊಳಗ, ಆಟಿಕೆ, ಮುಂತಾದವುಗಳ ತಯಾರಿಕೆಗೆ ಉಪಯುಕ್ತವೆನಿಸಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ